ಮನೆಯಲ್ಲೇ ಕುಳಿತು ಎಲ್‌ಪಿಜಿ ಖಾತೆ, ಆಧಾರ್, ಬ್ಯಾಂಕ್ ಖಾತೆ ಸಂಪರ್ಕಿಸಿ

ಮಾನ್ಯರೇ, ಒಳ್ಳೆಯ ಮಾಹಿತಿ ಇಂತಹ ಮಾಹಿತಿಗಳು ಆಗಾಗ ಬರುತ್ತಿರಲಿ. ವಂದನೆಗಳು.

Digi Kannada | ಡಿಜಿ ಕನ್ನಡ

Adharಅಡುಗೆ ಅನಿಲದ ಪ್ರತೀ ಸಿಲಿಂಡರ್‌ಗೆ ಕೇಂದ್ರ ಸರಕಾರ ಸಬ್ಸಿಡಿ ನೀಡುತ್ತಿದೆ ಎಂಬುದು ಎಲ್ಲರಿಗೆ ತಿಳಿದಿದೆ. ಆದರೆ ಮಾರ್ಚ್ ತಿಂಗಳ ಬಳಿಕ ಅಡುಗೆ ಅನಿಲಕ್ಕೆ ಪೂರ್ತಿ ಹಣ ಪಾವತಿಸಬೇಕಾಗುತ್ತದೆ. ಒಂದು ಬಾರಿಯ ಸಬ್ಸಿಡಿ ಹಣವು ನಮ್ಮ ಖಾತೆಗೆ ಮುಂಗಡವಾಗಿ ಬಂದು ಬೀಳುತ್ತದೆ. ಇದಕ್ಕಾಗಿ ಬ್ಯಾಂಕ್ ಖಾತೆ ಮತ್ತು ಎಲ್‌ಪಿಜಿ ಖಾತೆಗಳನ್ನು ಪರಸ್ಪರ ಬೆಸೆಯಬೇಕು, ಜತೆಗೆ ಆಧಾರ್ ಸಂಖ್ಯೆ ಕೂಡ ಸಂಪರ್ಕಗೊಳ್ಳಬೇಕೆಂದು ಎಲ್‌ಪಿಜಿ ವಿತರಕರು ಎಸ್ಸೆಮ್ಮೆಸ್ ಕಳುಹಿಸುತ್ತಲೇ ಇದ್ದಾರೆ. ಈ ರೀತಿ ಲಿಂಕ್ ಮಾಡಲು ಕಚೇರಿಗಳಿಗೆ ಅಲೆದಾಡಿ ಸಮಯ ವ್ಯರ್ಥ ಮಾಡುವ ಬದಲು, ಹದಿನೈದು ನಿಮಿಷದೊಳಗೆ ಸುಲಭವಾಗಿ ಕೆಲಸ ಮುಗಿಸಬಹುದು.

ಕಂಪ್ಯೂಟರ್, ಇಂಟರ್ನೆಟ್ ಜತೆಗೆ ನೀವು ಸಿದ್ಧ ಮಾಡಿಟ್ಟುಕೊಳ್ಳಬೇಕಾಗಿರುವ ವಿಷಯಗಳು:
1. ನಿಮ್ಮ 16 ಅಂಕಿಗಳ ಆಧಾರ್ ಸಂಖ್ಯೆ
2. ಎಲ್‌ಪಿಜಿ ವಿತರಕರ (ಡಿಸ್ಟ್ರಿಬ್ಯೂಟರ್) ಸರಿಯಾದ ಹೆಸರು
3. ಎಲ್‌ಪಿಜಿ ಗ್ರಾಹಕ ಸಂಖ್ಯೆ (ಎಲ್‌ಪಿಜಿ ಪಾಸ್‌ಬುಕ್ ಅಥವಾ ಕಾರ್ಡ್‌ನಲ್ಲಿರುವ ಆರಂಕಿಯ ಸಂಖ್ಯೆ)
4. ನೆಟ್ ಬ್ಯಾಂಕಿಂಗ್‌ನ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ
5. ಎಲ್‌ಪಿಜಿ ಐಡಿ (17 ಅಂಕಿಯ ಒಂದು ಸಂಖ್ಯೆ)
6. ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ

http://bit.ly/AdharLPG ಎಂಬಲ್ಲಿ ಹೋಗಿ, Start Now ಎಂಬ ಬಟನ್ ಒತ್ತಿಬಿಡಿ. ಅಲ್ಲಿ ತೆರೆದುಕೊಳ್ಳುವ ಪುಟದ ಒಂದನೇ ಹಂತದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, 2ನೇ ಹಂತದಲ್ಲಿ ನೀವು ಪಡೆಯಬೇಕೆಂದಿರುವ ಪ್ರಯೋಜನದ ವಿಧವನ್ನು LPG ಅಂತಲೂ, ‘ಸ್ಕೀಮ್’ ಎಂದಿರುವಲ್ಲಿ, ನಿಮ್ಮ ಎಲ್‌ಪಿಜಿ ವಿತರಣಾ ಕಂಪನಿಯ ಹೆಸರನ್ನು [ಬಿಪಿಸಿಎಲ್ (ಭಾರತ್), ಹೆಚ್‌ಪಿಸಿಎಲ್ ಅಥವಾ…

View original post 293 more words

Standard